ಬೆಂಗಳೂರು: ಇಂದು ರಾತ್ರಿ 9 ಗಂಟೆ ನಂತರ ಬೆಂಗಳೂರಿನಿಂದ ಇತರ ಸ್ಥಳಗಳಿಗೆ ಯಾವುದೇ ಬಸ್ ಸಂಚಾರ ಇರುವುದಿಲ್ಲ. ಇತರ ಊರುಗಳಿಗೆ ತೆರಳುವವರು 9 ಗಂಟೆ ಒಳಗೆ ಬಸ್ ನಿಲ್ದಾಣಕ್ಕೆ ಬರಬೇಕು ಎಂಬ ಮಾಹಿತಿ ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ. ಈಗಾಗಲೇ ಬುಕಿಂಗ್ ಮಾಡಿರುವ ಬಸ್ಗಳು ಕೂಡ ರಾತ್ರಿ 9 ಗಂಟೆಯ ಒಳಗೆ ಬೆಂಗಳೂರಿನಿಂದ ಹೊರಡಲಿವೆ ಎಂದು ತಿಳಿದುಬಂದಿದೆ. ಲಾಕ್‌ಡೌನ್ ಮುಗಿಯುವವರೆಗೆ ಯಾವುದೇ ಬಸ್ ಸೇವೆ ಇರುವುದಿಲ್ಲ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.
xದೇಶಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಿ, ಖಾಸಗಿ ಎನ್ನದೇ ಆಸ್ಪತ್ರೆಗಳು ಭರ್ತಿಯಾಗಿವೆ. ಆದ್ರೆ ಕೆಲ ಖಾಸಗಿ ಆಸ್ಪತ್ರೆಗಳು ಮಾತ್ರ ಈ ಸಂದರ್ಭದಲ್ಲಿ ಅಕ್ಷರಶಃ ಅಮಾನವೀಯವಾಗಿ ವರ್ತಿಸ್ತಿವೆ. ಈಗ ಇಂತದ್ದೇ ಆರೋಪ ನಗರದ ಪ್ರತಿಷ್ಠಿತ ಆಸ್ಪತ್ರೆ ವಿರುದ್ಧವೂ ಕೇಳಿ ಬಂದಿದೆ.